ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತರು ಸಿರ್ಸಿಯ ಪಂಡಿತ್ ಜನರಲ್ ಆಸ್ಪತ್ರೆ, ಕುಮಟಾದ ಗಿಬ್ಬ ಹೈಸ್ಕೂಲ್ ಮತ್ತು ಕೆ. ಡಿ. ಸಿ. ಸಿ. ಬ್ಯಾಂಕ್ ಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸಿರ್ಸಿ ಪುರಸಭೆಯಲ್ಲಿ ೨ ದಶಕಕ್ಕೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿದರು. == ಜನನ-ವಿದ್ಯಾಭ್ಯಾಸ == ೧೯೫೪ರಲ್ಲಿ ಸಿರ್ಸಿಯಲ್ಲಿ ಜನಿಸಿದ ಪಂಡಿತರು, ಕುಮಟಾದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಮುಂಬೈಯಲ್ಲಿ ಉಚ್ಛಶಿಕ್ಷಣ ಪೂರೈಸಿ (ಹೈಕೋರ್ಟ್ ಪ್ಲೀಡರ್ ಪದವಿ), ಸಿರ್ಸಿಯಲ್ಲಿ ವಕೀಲರಾದದು. == ಪ್ರಮುಖ ಕೊಡುಗೆಗಳು == ಪಂಡಿತ್ ಜನರಲ್ ಆಸ್ಪತ್ರೆ, ಸಿರ್ಸಿ ಪಂಡಿತ್ ಜನರಲ್ ವಾಚನಾಲಯ, ಸಿರ್ಸಿ (೧೯೦೫) ಗಿಬ್ಬ ಹೈಸ್ಕೂಲ್ ಮತ್ತು ಪಂಡಿತ ವಿದ್ಯಾರ್ಥಿ ವಸತಿ ನಿಲಯ, ಕುಮಟಾ ಕೆ. ಡಿ. ಸಿ. ಸಿ. ಬ್ಯಾಂಕ್ (ಕೆನರಾ ಡಿಸ್ಟ್ರಿಕ್ಟ್ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್) == ಪ್ರಶಸ್ತಿಗಳು == ರಾವ್ ಸಾಹೇಬ, ಬ್ರಿಟಿಷ್ ಸರಕಾರ ರಾವ್ ಬಹದ್ದೂರ, ಬ್ರಿಟಿಷ್ ಸರಕಾರ == ಪ್ರಮುಖ ಹುದ್ದೆಗಳು == ಉಪಾಧ್ಯಕ್ಷರು, ಸಿರ್ಸಿ ಪುರಸಭೆ, ೧೮೮೫-೧೮೯೬ (ಹನ್ನೊಂದು ವರ್ಷಗಳು) ಅಧ್ಯಕ್ಷರು, ಸಿರ್ಸಿ ಪುರಸಭೆ, ೧೮೯೮-೧೯೦೧(ಅವಧಿ - ೧: ಮೂರು ವರ್ಷಗಳು) ಅಧ್ಯಕ್ಷರು, ಸಿರ್ಸಿ ಪುರಸಭೆ, ೧೯೦೭-೧೯೧೬ (ಅವಧಿ - ೨: ಒಂಬತ್ತು ವರ್ಷಗಳು) ಅಧ್ಯಕ್ಷರು, ಕೆ. ಡಿ. ಸಿ. ಸಿ. ಬ್ಯಾಂಕ್, ಸಿರ್ಸಿ, ೧೯೨೦-೧೯೨೪ == ಮರಣ == ೧೯೩೫ರ ಮೇ ತಿಂಗಳಲ್ಲಿ ಮರಣ ಹೊಂದಿದರು.